GK Poetries
ನಿನ್ನೊಂದಿಗೆ
ನಿನ್ನೊಂದಿಗೆ ಕಳೆದ ಮಧುರ ಕ್ಷಣಗಳು
ಬದುಕಿನುದ್ದಕ್ಕೂ
ಜೊತೆಯಾಗಿ
ಬರಲಿದೆ ನೆರಳಾಗಿ
ನೀನಿಲ್ಲದ ಕನಸುಗಳಿಲ್ಲ
ನೀನಿಲ್ಲದ ಬದುಕಿಲ್ಲ
ನಿನ್ನೊಲುಮೆಗೆ ಪ್ರತಿಯಾಗಿ
ಪ್ರೀತಿಯ ತೋರಣವ
ಕಟ್ಟುವೆ ನಿನ್ನ
ಹೃದಯದ ಬಾಗಿಲಿಗೆ
ಬಾ ಬೇಗ ಪ್ರೇಮದ ಸಿರಿಯೆ
ಈ ಹೃದಯ
ಸಿಂಹಾಸನವ
ನಿನಗಾಗಿ ಕಯ್ದಿರಿಸುವೆ
ಜೀವದ ಗೆಳತಿಯೇ
ಜೀವದೊಡತಿಯಾಗು ಬಾ...
-ಜಿ.ಕೆ.
No comments:
Post a Comment